KANNADA KAVANAGALU
ಎಲ್ಲಿಯ ಝೇಂಕಾರ ! ಎಲ್ಲಿಯ ಸಾಕ್ಷಾತ್ಕಾರ.!.
ಮೂಕ ಮನವು ಹಾರಿ ಹಾರಿ
ತನ್ನ ಇನಿಯ ನೊಡನೆ ಆಗಸ
ಚುಂಬಿಸುವ ಬಯಕೆ ,
ಮುಗಿಲನ್ನು ಮುಟ್ಟು ವಾಸೆ...
ಇನ್ನೇನು ಆಗಸದಲ್ಲೇ ನನ್ನ ಜೀವನ
ಸಾಗಿತು ಎಂದು ನಿಟ್ಟುಸಿರು ಬಿಡಲು
ಮರಿ ಮನಗಳ ಕಲರವ
ತಾಯ್ತನ ಬೆಸೆಯುವಲ್ಲಿಯೇ
ಕಳಚಿತು ಇನಿಯನ ಬೆಸುಗೆ,ಆಗಸ
ಸನಿಹ ವಿಲ್ಲದ ವಿರಹ
ಇನಿಯ ನಿಲ್ಲದ
ತನುವು ನಿನ್ನದು ಮನವು ನಿನ್ನದು
ಎಂದವ ನಿಲ್ಲದೆ ಬರಿದಾಗಿ ಕಾಣಿಸಿತು
ಕಾರ್ಮೋಡದ ಛಾಯೆ.. ..
ಗೋಗರೆದು ಕೈಮುಗಿದು ಬಾಗಿ
ಜೀವಕೆ ರಕ್ಷಕನಾಗೆಂದು ಯಾಚಿಸಿ ,ಆರ್ಭಟಿಸಲು,
ಮತ್ತೊಂದು ಕೊಂಡಿಗೆ
ಬೆಸುಗೆ ಯಾಗಿದ್ದು ದಿಟ ಎಂದರಿತಾಗ,
ಮೂಕ ಮನಕೆ ಎನಿಸಿತು,
ಎಲ್ಲಿಯ ಝೇಂಕಾರ... ! ಎಲ್ಲಿಯ ಸಾಕ್ಷಾತ್ಕಾರ...!
ಡಾ. ಸೌಮ್ಯ .ದೇ. ಚಿಕ್ಕಮಗಳೂರು.
Comments